ಮಾಂಡೂಕ್ಯೋಪನಿಷದ್ಭಾಷ್ಯಮ್
ಆನಂದಗಿರಿಟೀಕಾ (ಮಾಂಡೂಕ್ಯ)
 
ವಿಶ್ವಸ್ಯಾತ್ವವಿವಕ್ಷಾಯಾಮಾದಿಸಾಮಾನ್ಯಮುತ್ಕಟಮ್ ।
ಮಾತ್ರಾಸಂಪ್ರತಿಪತ್ತೌ ಸ್ಯಾದಾಪ್ತಿಸಾಮಾನ್ಯಮೇವ ಚ ॥ ೧೯ ॥
ಅತ್ರ ಏತೇ ಶ್ಲೋಕಾ ಭವಂತಿ । ವಿಶ್ವಸ್ಯ ಅತ್ವಮ್ ಅಕಾರಮಾತ್ರತ್ವಂ ಯದಾ ವಿವಕ್ಷ್ಯತೇ, ತದಾ ಆದಿತ್ವಸಾಮಾನ್ಯಮ್ ಉಕ್ತನ್ಯಾಯೇನ ಉತ್ಕಟಮ್ ಉದ್ಭೂತಂ ದೃಶ್ಯತ ಇತ್ಯರ್ಥಃ । ಅತ್ವವಿವಕ್ಷಾಯಾಮಿತ್ಯಸ್ಯ ವ್ಯಾಖ್ಯಾನಮ್ — ಮಾತ್ರಾಸಂಪ್ರತಿಪತ್ತೌ ಇತಿ । ವಿಶ್ವಸ್ಯ ಅಕಾರಮಾತ್ರತ್ವಂ ಯದಾ ಸಂಪ್ರತಿಪದ್ಯತೇ ಇತ್ಯರ್ಥಃ । ಆಪ್ತಿಸಾಮಾನ್ಯಮೇವ ಚ, ಉತ್ಕಟಮಿತ್ಯನುವರ್ತತೇ, ಚ - ಶಬ್ದಾತ್ ॥

ಪ್ರಥಮಪಾದಸ್ಯ ಪ್ರಥಮಮಾತ್ರಾಯಾಶ್ಚಾಭೇದಾರೋಪಾರ್ಥಮುಕ್ತಂ ಸಾಮಾನ್ಯದ್ವಯಂ ವಿಶದಯತಿ –

ವಿಶ್ವಸ್ಯೇತಿ ।

ಉಕ್ತನ್ಯಾಯೇನಾಽಽದಿರಸ್ಯೇತ್ಯಾದಾವಿತಿ ಶೇಷಃ ।

ಪುನರುಕ್ತಿಪರಿಹಾರದ್ವಾರಾ ವಿವಕ್ಷಿತಮರ್ಥಮಾಹ –

ಅತ್ವೇತಿ ।

ಅನುವೃತ್ತಿದ್ಯೋತಕಂ ದರ್ಶಯತಿ –

ಚಶಬ್ದಾದಿತಿ ॥೧೯॥