ಆಧಿದೈವಿಕಯೋರ್ವಾಙ್ಮನಸಯೋರ್ವಿಭೂತಿನಿರ್ದೇಶಾನಂತರ್ಯಮಥೇತ್ಯುಕ್ತಮ್ । ನನ್ವೇತಸ್ಯೇತ್ಯೇತಚ್ಛಬ್ದೇನ ಪ್ರಜಾತ್ವೇನೋಕ್ತಸ್ಯ ಪ್ರಾಣಸ್ಯ ಕಿಮಿತಿ ನ ಗ್ರಹಣಂ ತತ್ರಾಽಽಹ —
ನ ಪ್ರಜೇತಿ ।
ಅನ್ನತ್ರಯಸ್ಯ ಸಮಪ್ರಧಾನತ್ವೇನ ಪ್ರಕೃತತ್ವಾದೇತಚ್ಛಬ್ದೇನ ಪ್ರಧಾನಪರಾಮರ್ಶೋಪಪತ್ತೌ ನಾಪ್ರಧಾನಂ ಪರಾಮೃಶ್ಯತ ಇತ್ಯರ್ಥಃ । ಪೂರ್ವವದ್ವಾಚೋ ಮನಸಶ್ಚ ಪೃಥಿವೀ ದ್ಯೌಶ್ಚ ಶರೀರಂ ಯಥಾ ತಥೇತ್ಯರ್ಥಃ ।
ದ್ವೈರೂಪ್ಯೇ ಪ್ರಾಣಸ್ಯೋಕ್ತೇ ವ್ಯಾಪ್ತಿಮವಿಶಿಷ್ಟಾಂ ವ್ಯಾಚಷ್ಟೇ —
ತತ್ರೇತಿ ।
ತಾವಾನಿತ್ಯಾದಿ ಪ್ರತೀಕಮಾದಾಯ ವ್ಯಾಚಷ್ಟೇ —
ಚಂದ್ರ ಇತಿ ।
ವಾಙ್ಮನಃಪ್ರಾಣಾನಾಮಾಧಿದೈವಿಕರೂಪೇಣೋಪಾಸನಂ ವಿಧಾತುಂ ವೃತ್ತಂ ಕೀರ್ತಯತಿ —
ತಾನೀತಿ ।
ಏತೇಭ್ಯೋಽತಿರಿಕ್ತಮಧಿಷ್ಠಾನಮಸ್ತೀತ್ಯಾಶಂಕ್ಯ ವಿಶಿನಷ್ಟಿ —
ಕಾರ್ಯಾತ್ಮಕಮಿತಿ ।
ಪ್ರಜಾಪತಿರೇತೇಭ್ಯೋಽತಿರಿಕ್ತೋಽಸ್ತೀತ್ಯಾಶಂಕ್ಯಾಽಽಹ —
ಸಮಸ್ತಾನೀತಿ ।
ಸೋಪಸ್ಕರಂ ವೃತ್ತಮನೂದ್ಯ ವಾಕ್ಯಮಾದಾಯ ವ್ಯಾಚಷ್ಟೇ —
ತ ಏತ ಇತಿ ।
ತುಲ್ಯಾಂ ವ್ಯಾಪ್ತಿಮೇವ ವ್ಯನಕ್ತಿ —
ಯಾವದಿತಿ ।
ತಾವದಶೇಷಂ ಜಗದ್ವ್ಯಾಪ್ಯೇತಿ ಯೋಜನಾ ।
ತುಲ್ಯವ್ಯಾಪ್ತಿಮತ್ತ್ವಮುಪಜೀವ್ಯಾಽಽಹ —
ಅತ ಏವೇತಿ ।
ತೇಷಾಂ ಯಾವತ್ಸಂಸಾರಭಾವಿತ್ವಮಭಿವ್ಯನಕ್ತಿ —
ನ ಹೀತಿ ।
ಕಾರ್ಯಕರಣಯೋರ್ಯಾವತ್ಸಂಸಾರಭಾವಿತ್ವೇಽಪಿ ಪ್ರಾಣಾನಾಂ ಕಿಮಾಯಾತಮತ ಆಹ —
ಕಾರ್ಯೇತಿ ।
ತೇಷು ಪರಿಚ್ಛಿನ್ನತ್ವೇನ ಧ್ಯಾನೇ ದೋಷಮಾಹ —
ಸ ಯ ಇತಿ ।
ಏವಂ ಪಾತನಿಕಾಂ ಕೃತ್ವಾ ವಿವಕ್ಷಿತಮುಪಾಸನಾಮುಪದಿಶತಿ —
ಅಥೇತಿ ॥೧೩॥