ಸ ವಾ ಏಷ ಮಹಾನಜ ಆತ್ಮಾ ಯೋಽಯಂ ವಿಜ್ಞಾನಮಯಃ ಪ್ರಾಣೇಷು ಯ ಏಷೋಽಂತರ್ಹೃದಯ ಆಕಾಶಸ್ತಸ್ಮಿಂಛೇತೇ ಸರ್ವಸ್ಯ ವಶೀ ಸರ್ವಸ್ಯೇಶಾನಃ ಸರ್ವಸ್ಯಾಧಿಪತಿಃ ಸ ನ ಸಾಧುನಾ ಕರ್ಮಣಾ ಭೂಯಾನ್ನೋ ಏವಾಸಾಧುನಾ ಕನೀಯಾನೇಷ ಸರ್ವೇಶ್ವರ ಏಷ ಭೂತಾಧಿಪತಿರೇಷ ಭೂತಪಾಲ ಏಷ ಸೇತುರ್ವಿಧರಣ ಏಷಾಂ ಲೋಕಾನಾಮಸಂಭೇದಾಯ ತಮೇತಂ ವೇದಾನುವಚನೇನ ಬ್ರಾಹ್ಮಣಾ ವಿವಿದಿಷಂತಿ ಯಜ್ಞೇನ ದಾನೇನ ತಪಸಾನಾಶಕೇನೈತಮೇವ ವಿದಿತ್ವಾ ಮುನಿರ್ಭವತಿ । ಏತಮೇವ ಪ್ರವ್ರಾಜಿನೋ ಲೋಕಮಿಚ್ಛಂತಃ ಪ್ರವ್ರಜಂತಿ । ಏತದ್ಧ ಸ್ಮ ವೈ ತತ್ಪೂರ್ವೇ ವಿದ್ವಾಂಸಃ ಪ್ರಜಾಂ ನ ಕಾಮಯಂತೇ ಕಿಂ ಪ್ರಜಯಾ ಕರಿಷ್ಯಾಮೋ ಯೇಷಾಂ ನೋಽಯಮಾತ್ಮಾಯಂ ಲೋಕ ಇತಿ ತೇ ಹ ಸ್ಮ ಪುತ್ರೈಷಣಾಯಾಶ್ಚ ವಿತ್ತೈಷಣಾಯಾಶ್ಚ ಲೋಕೈಷಣಾಯಾಶ್ಚ ವ್ಯುತ್ಥಾಯಾಥ ಭಿಕ್ಷಾಚರ್ಯಂ ಚರಂತಿ ಯಾ ಹ್ಯೇವ ಪುತ್ರೈಷಣಾ ಸಾ ವಿತ್ತೈಷಣಾ ಯಾ ವಿತ್ತೈಷಣಾ ಸಾ ಲೋಕೈಷಣೋಭೇ ಹ್ಯೇತೇ ಏಷಣೇ ಏವ ಭವತಃ । ಸ ಏಷ ನೇತಿ ನೇತ್ಯಾತ್ಮಾಗೃಹ್ಯೋ ನ ಹಿ ಗೃಹ್ಯತೇಽಶೀರ್ಯೋ ನ ಹಿ ಶೀರ್ಯತೇಽಸಂಗೋ ನ ಹಿ ಸಜ್ಯತೇಽಸಿತೋ ನ ವ್ಯಥತೇ ನ ರಿಷ್ಯತ್ಯೇತಮು ಹೈವೈತೇ ನ ತರತ ಇತ್ಯತಃ ಪಾಪಮಕರವಮಿತ್ಯತಃ ಕಲ್ಯಾಣಮಕರವಮಿತ್ಯುಭೇ ಉ ಹೈವೈಷ ಏತೇ ತರತಿ ನೈನಂ ಕೃತಾಕೃತೇ ತಪತಃ ॥ ೨೨ ॥
ಯಸ್ಮಾತ್ ಸರ್ವೈಷಣಾವಿನಿವೃತ್ತಃ ಸ ಏಷ ನೇತಿ ನೇತ್ಯಾತ್ಮಾನಮಾತ್ಮತ್ವೇನೋಪಗಮ್ಯ ತದ್ರೂಪೇಣೈವ ವರ್ತತೇ, ತಸ್ಮಾತ್ ಏತಮ್ ಏವಂವಿದಂ ನೇತಿ ನೇತ್ಯಾತ್ಮಭೂತಮ್ , ಉ ಹ ಏವ ಏತೇ ವಕ್ಷ್ಯಮಾಣೇ ನ ತರತಃ ನ ಪ್ರಾಪ್ನುತಃ — ಇತಿ ಯುಕ್ತಮೇವೇತಿ ವಾಕ್ಯಶೇಷಃ । ಕೇ ತೇ ಇತ್ಯುಚ್ಯತೇ — ಅತಃ ಅಸ್ಮಾನ್ನಿಮಿತ್ತಾತ್ ಶರೀರಧಾರಣಾದಿಹೇತೋಃ, ಪಾಪಮ್ ಅಪುಣ್ಯಂ ಕರ್ಮ ಅಕರವಂ ಕೃತವಾನಸ್ಮಿ — ಕಷ್ಟಂ ಖಲು ಮಮ ವೃತ್ತಮ್ , ಅನೇನ ಪಾಪೇನ ಕರ್ಮಣಾ ಅಹಂ ನರಕಂ ಪ್ರತಿಪತ್ಸ್ಯೇ — ಇತಿ ಯೋಽಯಂ ಪಶ್ಚಾತ್ ಪಾಪಂ ಕರ್ಮ ಕೃತವತಃ — ಪರಿತಾಪಃ ಸ ಏವಂ ನೇತಿ ನೇತ್ಯಾತ್ಮಭೂತಂ ನ ತರತಿ ; ತಥಾ ಅತಃ ಕಲ್ಯಾಣಂ ಫಲವಿಷಯಕಾಮಾನ್ನಿಮಿತ್ತಾತ್ ಯಜ್ಞದಾನಾದಿಲಕ್ಷಣಂ ಪುಣ್ಯಂ ಶೋಭನಂ ಕರ್ಮ ಕೃತವಾನಸ್ಮಿ, ಅತೋಽಹಮ್ ಅಸ್ಯ ಫಲಂ ಸುಖಮುಪಭೋಕ್ಷ್ಯೇ ದೇಹಾಂತರೇ — ಇತ್ಯೇಷೋಽಪಿ ಹರ್ಷಃ ತಂ ನ ತರತಿ । ಉಭೇ ಉ ಹ ಏವ ಏಷಃ ಬ್ರಹ್ಮವಿತ್ ಏತೇ ಕರ್ಮಣೀ ತರತಿ ಪುಣ್ಯಪಾಪಲಕ್ಷಣೇ । ಏವಂ ಬ್ರಹ್ಮವಿದಃ ಸನ್ನ್ಯಾಸಿನ ಉಭೇ ಅಪಿ ಕರ್ಮಣೀ ಕ್ಷೀಯೇತೇ — ಪೂರ್ವಜನ್ಮನಿ ಕೃತೇ ಯೇ ತೇ, ಇಹ ಜನ್ಮನಿ ಕೃತೇ ಯೇ ತೇ ಚ ; ಅಪೂರ್ವೇ ಚ ನ ಆರಭ್ಯೇತೇ । ಕಿಂ ಚ ನೈನಂ ಕೃತಾಕೃತೇ, ಕೃತಂ ನಿತ್ಯಾನುಷ್ಠಾನಮ್ , ಅಕೃತಂ ತಸ್ಯೈವ ಅಕ್ರಿಯಾ, ತೇ ಅಪಿ ಕೃತಾಕೃತೇ ಏನಂ ನ ತಪತಃ ; ಅನಾತ್ಮಜ್ಞಂ ಹಿ, ಕೃತಂ ಫಲದಾನೇನ, ಅಕೃತಂ ಪ್ರತ್ಯವಾಯೋತ್ಪಾದನೇನ, ತಪತಃ ; ಅಯಂ ತು ಬ್ರಹ್ಮವಿತ್ ಆತ್ಮವಿದ್ಯಾಗ್ನಿನಾ ಸರ್ವಾಣಿ ಕರ್ಮಾಣಿ ಭಸ್ಮೀಕರೋತಿ,
‘ಯಥೈಧಾಂಸಿ ಸಮಿದ್ಧೋಽಗ್ನಿಃ’ (ಭ. ಗೀ. ೪ । ೩೭) ಇತ್ಯಾದಿಸ್ಮೃತೇಃ ; ಶರೀರಾರಂಭಕಯೋಸ್ತು ಉಪಭೋಗೇನೈವ ಕ್ಷಯಃ । ಅತೋ ಬ್ರಹ್ಮವಿತ್ ಅಕರ್ಮಸಂಬಂಧೀ ॥