ಸಮಾಪ್ತೇ ಶಾರೀರಕಬ್ರಾಹ್ಮಣೇ ವಂಶಬ್ರಾಹ್ಮಣಂ ವ್ಯಾಖ್ಯಾತವ್ಯಂ ಕೃತಂ ಗತಾರ್ಥೇನ ಮೈತ್ರೇಯೀಬ್ರಾಹ್ಮಣೇನೇತ್ಯಾಶಂಕ್ಯ ಮಧುಕಾಂಡಾರ್ಥಮನುದ್ರವತಿ —
ಆಗಮೇತಿ ।
ಪಾಂಚಮಿಕಮರ್ಥಮನುಭಾಷತೇ —
ಪುನರಿತಿ ।
ತಸ್ಯೈವ ಬ್ರಹ್ಮಣಸ್ತತ್ತ್ವಮಿತಿ ಶೇಷಃ । ವಿಗೃಹ್ಯವಾದೋ ಜಯಪರಾಜಯಪ್ರಧಾನೋ ಜಲ್ಪನ್ಯಾಯಃ ।
ಷಷ್ಠ ಪ್ರತಿಷ್ಠಾಪಿತಮನುವದತಿ —
ಶಿಷ್ಯೇತಿ ।
ಪ್ರಶ್ನಪ್ರತಿವಚನನ್ಯಾಯಸ್ತತ್ತ್ವನಿರ್ಣಯಪ್ರಧಾನೋ ವಾದಃ । ಉಪಸಂಹೃತಂ ತದೇವ ತತ್ತ್ವಮಿತಿ ಶೇಷಃ ।
ಸಂಪ್ರತ್ಯುತ್ತರಬ್ರಾಹ್ಮಣಸ್ಯಾಗತಾರ್ಥತ್ವಮಾಹ —
ಅಥೇತಿ ।
ಆಗಮೋಪಪತ್ತಿಭ್ಯಾಂ ನಿಶ್ಚಿತೇ ತತ್ತ್ವೇ ನಿಗಮನಮಕಿಂಚಿತ್ಕರಮಿತ್ಯಾಶಂಕ್ಯಾಽಽಹ —
ಅಯಂ ಚೇತಿ ।
ಪ್ರಕಾರಾಂತರೇಣ ಸಂಗತಿಮಾಹ —
ಅಥವೇತಿ ।
ಕಥಮಿಹ ತರ್ಕೇಣಾಧಿಗತಿಸ್ತತ್ರಾಽಽಹ —
ತರ್ಕೇತಿ ।
ಮುನಿಕಾಂಡಸ್ಯ ತರ್ಕಪ್ರಧಾನತ್ವೇ ಕಿಂ ಸ್ಯಾತ್ತದಾಹ —
ತಸ್ಮಾದಿತಿ ।
ಇತಿ ಫಲತೀತಿ ಶೇಷಃ ।
ಶಾಸ್ತ್ರಾದಿನಾ ಯಥೋಕ್ತಸ್ಯ ಜ್ಞಾನಸ್ಯ ನಿಶ್ಚಿತತ್ತ್ವೇಽಪಿ ಕಿಂ ಸಿಧ್ಯತಿ ತದಾಹ —
ತಸ್ಮಾಚ್ಛಾಸ್ತ್ರಶ್ರದ್ಧಾವದ್ಭಿರಿತಿ ।
ಏತಚ್ಛಬ್ದೋ ಯಥೋಕ್ತಜ್ಞಾನಪರಾಮರ್ಶಾರ್ಥಃ । ಇತಿ ಸಿಧ್ಯತೀತಿ ಶೇಷಃ ।
ತತ್ರ ಹೇತುಮಾಹ —
ಆಗಮೇತಿ ।
ಅವ್ಯಭಿಚಾರಾನ್ಮಾನಯುಕ್ತಿಗಮ್ಯಸ್ಯಾರ್ಥಸ್ಯ ತಥೈವ ಸತ್ತ್ವಾದಿತಿ ಯಾವತ್ । ಇತಿಶಬ್ದೋ ಬ್ರಾಹ್ಮಣಸಂಗತಿಸಮಾಪ್ತ್ಯರ್ಥಃ ।
ತಾತ್ಪರ್ಯಾರ್ಥೇ ವ್ಯಾಖ್ಯಾತೇ ಸತ್ಯಕ್ಷರವ್ಯಾಖ್ಯಾನಪ್ರಸಕ್ತಾವಾಹ —
ಅಕ್ಷರಾಣಾಂ ತ್ವಿತಿ ।
ತರ್ಹಿ ಬ್ರಾಹ್ಮಣೇಽಸ್ಮಿನ್ವಕ್ತವ್ಯಾಭಾವಾತ್ಪರಿಸಮಾಪ್ತಿರೇವೇತ್ಯಾಶಂಕ್ಯಾಽಽಹ —
ಯಾನೀತಿ ।