ಶ್ರೀಮದ್ಭಗವದ್ಗೀತಾಭಾಷ್ಯಮ್
ಆನಂದಗಿರಿಟೀಕಾ (ಗೀತಾಭಾಷ್ಯ)
 
ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ
ಉಭಯೋರಪಿ ದೃಷ್ಟೋಽಂತಸ್ತ್ವನಯೋಸ್ತತ್ತ್ವದರ್ಶಿಭಿಃ ॥ ೧೬ ॥
ತಸ್ಮಾದ್ದೇಹಾದೇಃ ದ್ವಂದ್ವಸ್ಯ ಸಕಾರಣಸ್ಯ ಅಸತೋ ವಿದ್ಯತೇ ಭಾವ ಇತಿತಥಾ ಸತಶ್ಚ ಆತ್ಮನಃ ಅಭಾವಃ ಅವಿದ್ಯಮಾನತಾ ವಿದ್ಯತೇ, ಸರ್ವತ್ರ ಅವ್ಯಭಿಚಾರಾತ್ ಇತಿ ಅವೋಚಾಮ
ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ
ಉಭಯೋರಪಿ ದೃಷ್ಟೋಽಂತಸ್ತ್ವನಯೋಸ್ತತ್ತ್ವದರ್ಶಿಭಿಃ ॥ ೧೬ ॥
ತಸ್ಮಾದ್ದೇಹಾದೇಃ ದ್ವಂದ್ವಸ್ಯ ಸಕಾರಣಸ್ಯ ಅಸತೋ ವಿದ್ಯತೇ ಭಾವ ಇತಿತಥಾ ಸತಶ್ಚ ಆತ್ಮನಃ ಅಭಾವಃ ಅವಿದ್ಯಮಾನತಾ ವಿದ್ಯತೇ, ಸರ್ವತ್ರ ಅವ್ಯಭಿಚಾರಾತ್ ಇತಿ ಅವೋಚಾಮ

ಘಟಾದೇಃ ಸತಿ ಕಲ್ಪಿತತ್ವಾನುಮಾನಸ್ಯ ದೋಷರಾಹಿತ್ಯೇ, ಫಲಿತಮುಪಸಂಹರತಿ -

ತಸ್ಮಾದಿತಿ ।

ಪ್ರಥಮಪಾದವ್ಯಾಖ್ಯಾನಪರಿಸಾಮಾಪ್ತಾವಿತಿಶಬ್ದಃ । ನನು - ನೇದಂ ವ್ಯಾಖ್ಯಾನಂ ಭಾಷ್ಯಕಾರಾಭಿಪ್ರೇತಮ್ , ಸರ್ವದ್ವೈತಶೂನ್ಯತ್ವವಿವಕ್ಷಾಯಾಂ ಶಾಸ್ತ್ರತದ್ಭಾಷ್ಯವಿರೋಧಾತ್ । ಕೇನಾಪಿ ಪುನರ್ದುರ್ವಿದಗ್ಧೇನ ಸ್ವಮನೀಷಿಕಯೋತ್ಪ್ರೇಕ್ಷಿತಮೇತತ್ ಇತಿ ಚೇತ್ , ಮೈವಮ್ । ಕಿಮಿದಂ ದ್ವೈತಪ್ರಪಂಚಸ್ಯ ಶೂನ್ಯತ್ವಮ್ ? ಕಿಂ ತುಚ್ಛತ್ವಮ್ ? ಕಿಂ ವಾ ಸದ್ವಿಲಕ್ಷಣತ್ವಮ್ ? ನಾದ್ಯಃ, ಅನಭ್ಯುಪಗಮಾತ್ । ದ್ವಿತೀಯಾನಭ್ಯುಪಗಮೇ ತು ತವೈವ ಶಾಸ್ತ್ರವಿರೋಧೋ ಭಾಷ್ಯವಿರೋಧಶ್ಚ । ಸರ್ವಂ ಹಿ ಶಾಸ್ತ್ರಂ ತದ್ಭಾಷ್ಯಂ ಚ ದ್ವೈತಸ್ಯ ಸತ್ಯತ್ವಾನಧಿಕರಣತ್ವಸಾಧನೇನ ಅದ್ವೈತಸತ್ಯತ್ವೇ ಪರ್ಯವಸಿತಮಿತಿ ತ್ರೈವಿದ್ಯವೃದ್ಧೈಸ್ತತ್ರ ತತ್ರ ಪ್ರತಿಷ್ಠಾಪಿತಮ್ । ತಥಾ ಚ ಪ್ರಕ್ಷೇಪಾಶಂಕಾ ಸಂಪ್ರದಾಯಪರಿಚಯಾಭಾವಾತ್ ಇತಿ ದ್ರಷ್ಟವ್ಯಮ್ ।

ಅನಾತ್ಮಜಾತಸ್ಯ ಕಲ್ಪಿತತ್ವೇನ ಅವಸ್ತುತ್ವಪ್ರತಿಪಾದನಪರತಯಾ ಪ್ರಥಮಪಾದಂ ವ್ಯಾಖ್ಯಾಯ, ದ್ವಿತೀಯಪಾದಮಾತ್ಮನಃ ಸರ್ವಕಲ್ಪನಾಧಿಷ್ಠಾನಸ್ಯಾಕಲ್ಪಿತತ್ವೇನ ವಸ್ತುತ್ವಪ್ರಸಾಧನಪರತಯಾ ವ್ಯಾಕರೋತಿ -

ತಥೇತಿ ।

ನನು - ಆತ್ಮನಃ ಸದಾತ್ಮನೋ ವಿಶೇಷೇಷು ವಿನಾಶಿಷು ತದುಪರಕ್ತಸ್ಯ ವಿನಾಶಃ ಸ್ಯಾತ್ ಇತ್ಯಾಶಂಕ್ಯ, ವಿಶಿಷ್ಟನಾಶೇಽಪಿ ಸ್ವರೂಪಾನಾಶಸ್ಯೋಕ್ತತ್ವಾತ್ , ಮೈವಮಿತ್ಯಾಹ -

ಸರ್ವತ್ರೇತಿ ।