ಕಠೋಪನಿಷದ್ಭಾಷ್ಯಮ್
ಪ್ರಥಮೋಽಧ್ಯಾಯಃದ್ವಿತೀಯಾ ವಲ್ಲೀ
ಆನಂದಗಿರಿಟೀಕಾ (ಕಾಠಕ)
 
ಅಣೋರಣೀಯಾನ್ಮಹತೋ ಮಹೀಯಾನಾತ್ಮಾಸ್ಯ ಜಂತೋರ್ನಿಹಿತೋ ಗುಹಾಯಾಮ್ ।
ತಮಕ್ರತುಃ ಪಶ್ಯತಿ ವೀತಶೋಕೋ ಧಾತುಪ್ರಸಾದಾನ್ಮಹಿಮಾನಮಾತ್ಮನಃ ॥ ೨೦ ॥
ಕಥಂ ಪುನರಾತ್ಮಾನಂ ಜಾನಾತೀತಿ, ಉಚ್ಯತೇ — ಅಣೋಃ ಸೂಕ್ಷ್ಮಾತ್ ಅಣೀಯಾನ್ ಶ್ಯಾಮಾಕಾದೇರಣುತರಃ । ಮಹತೋ ಮಹತ್ಪರಿಮಾಣಾತ್ ಮಹೀಯಾನ್ ಮಹತ್ತರಃ ಪೃಥಿವ್ಯಾದೇಃ ; ಅಣು ಮಹದ್ವಾ ಯದಸ್ತಿ ಲೋಕೇ ವಸ್ತು, ತತ್ತೇನೈವಾತ್ಮನಾ ನಿತ್ಯೇನಾತ್ಮವತ್ಸಂಭವತಿ । ತದಾತ್ಮನಾ ವಿನಿರ್ಮುಕ್ತಮಸತ್ಸಂಪದ್ಯತೇ । ತಸ್ಮಾದಸಾವೇವಾತ್ಮಾ ಅಣೋರಣೀಯಾನ್ಮಹತೋ ಮಹೀಯಾನ್ , ಸರ್ವನಾಮರೂಪವಸ್ತೂಪಾಧಿಕತ್ವಾತ್ । ಸ ಚ ಆತ್ಮಾ ಅಸ್ಯ ಜಂತೋಃ ಬ್ರಹ್ಮಾದಿಸ್ತಂಬಪರ್ಯಂತಸ್ಯ ಪ್ರಾಣಿಜಾತಸ್ಯ ಗುಹಾಯಾಂ ಹೃದಯೇ ನಿಹಿತಃ ಆತ್ಮಭೂತಃ ಸ್ಥಿತ ಇತ್ಯರ್ಥಃ । ತಮ್ ಆತ್ಮಾನಂ ದರ್ಶನಶ್ರವಣಮನನವಿಜ್ಞಾನಲಿಂಗಮ್ ಅಕ್ರತುಃ ಅಕಾಮಃ, ದೃಷ್ಟಾದೃಷ್ಟಬಾಹ್ಯವಿಷಯೇಭ್ಯ ಉಪರತಬುದ್ಧಿರಿತ್ಯರ್ಥಃ । ಯದಾ ಚೈವಂ ತದಾ ಮನಆದೀನಿ ಕರಣಾನಿ ಧಾತವಃ ಶರೀರಸ್ಯ ಧಾರಣಾತ್ಪ್ರಸೀದಂತೀತ್ಯೇಷಾಂ ಧಾತೂನಾಂ ಪ್ರಸಾದಾದಾತ್ಮನೋ ಮಹಿಮಾನಂ ಕರ್ಮನಿಮಿತ್ತವೃದ್ಧಿಕ್ಷಯರಹಿತಂ ಪಶ್ಯತಿ ಅಯಮಹಮಸ್ಮೀತಿ ಸಾಕ್ಷಾದ್ವಿಜಾನಾತಿ ; ತತೋ ವಿಗತಶೋಕೋ ಭವತಿ ॥

ಅಕಾಮತ್ವಾದಿಸಾಧನಾಂತರವಿಧಾನಾರ್ಥಮುತ್ತರವಾಕ್ಯಮವತಾರಯತಿ -

ಕಥಂ ಪುನರಿತಿ ।

ಏಕಸ್ಯಾಣುತ್ವಂ ಮಹತ್ತ್ವಂ ಚ ವಿರುದ್ಧಂ ಕಥಮನೂದ್ಯತ ಇತ್ಯಾಶಂಕ್ಯಾಣುತ್ವಾದ್ಯಧ್ಯಾಸಾಧಿಷ್ಠಾನತ್ವಾದಣುತ್ವಾದಿವ್ಯವಹಾರೋ ನ ತತ್ತ್ವತ ಇತ್ಯವಿರೋಧಮಾಹ -

ಅಣು ಮಹದ್ವೇತಿ ॥ ೨೦ ॥